In Goa, on the beach
Smeru - I met the sea and it “waved” at me …
ಮಗುವಾಗಿದ್ದಾಗಿನ ಮುಗ್ಧತೆ, ಬಾಲ್ಯದ ಸವಿ, ಯೌವನದ ಭ್ರಮೆ, ವಾಸ್ತವದ ವಿಮಷೆ೯, ಭವಿಷ್ಯದ ಕಲ್ಪನೆಗಳ ಆಲೋಚನೆಯ ಹುಚ್ಚು ಹೊಳೆ... ಭಾವನೆಗಳ ಸುರಿಮಳೆ!
Smeru reading encyclopaedia on the couch! Evening around 8:30pm 25th of July 2023!
Asks “Amma whose right hand pains the most in the whole world?”
Amma - blank - says in what context ?
Akka - ‘ ahh? Right hand pains…?? Psst!’ What sort of question is it?
Smeru - it’s Statue of Liberty- because she is holding the light up with her right hand and never puts it down!
Hahhahhhahha
teacher asked "in a box there are 5 apples 4 oranges and 1 carrot. how many fruits are there in all?"
student 1: 10
student 2: 10
student n: 10
Smeru: 9 because carrot is. not a fruit
teacher: wow smera you are so intelligent
at home:
Smera: Amma I'm so intelligent in math... you know why....?
Amma: why... who said that?
Smera: mam asked me this question... and I'm the only one who answered right...thats why... now you tell me the answer...?
Amma: 10
Smera: tho.. you are not intelligent at all...
akka do you know the answer?
Akka: but smera in the question... carrot is not a fruit...
Smera spontaneously: ya you are right... you too are intelligent....🙄
amma: how did you realize that a carrot (vegetable) is included and you have to not count it...?
Smera: I watched the same thing in Peppa Pig... once rebekka rabbit also does the same mistake of counting a vegetable when asked for fruits.... so i knew the clue....
And you scold me for watching the TV... I should actually watch more to become intelligent....
Amma: 😲🤤😒😞
ಯಾರಿಗಾದರೂ ಸರಿ... ನಿಧಾನವಾಗಿ ತಿನ್ನಿ ಅಂತ ಉಪಚಾರದ ಮಾತಾಡಿದರೆ ಸಂತೋಷ ಆಗುತ್ತೆ. ಅದರಲ್ಲೂ ಮನೆಯಲ್ಲಿ ಎಲ್ಲರಿಗೂ ತಿಂಡಿ ಕೊಟ್ಟು ನಂತರ ತಾನು ತಿನ್ನುವ ಹೆಂಡತಿಗೆ ಗಂಡ ಹೀಗೆ ಹೇಳಿದರಂತೂ ಕೇಳುವುದೇ ಬೇಡ.
ನಿನ್ನೆ ಘಮ ಘಮ ಉಪ್ಪಿಟ್ಟು ಮಾಡಿ ಗರಿಗರಿಯಾದ ಖಾರಾ ಮಿಕ್ಸ್ಚರ್ ಜೊತೆ ತಿಂಡಿ ತಟ್ಟೆ ಹಿಡಿದು ಕೂತೆ. ಆ ವೇಳೆಗೆ ಆಗಲೇ ಎಲ್ಲರೂ ತಿಂಡಿ ಮುಗಿಸಿದ್ದರು. ಮೊದಲ ತುತ್ತು ಬಾಯಿಗೆ ಇಟ್ಟು ಆಹಾ ಎಂದು ಆಸ್ವಾದಿಸುವ ವೇಳೆಗೆ ಎದುರಿಗೆ ಇದ್ದ ಯಜಮಾನ "ನಿಧಾನವಾಗಿ ತಿನ್ನು ....!" ಎಂದಷ್ಟೇ ಹೇಳಿದ ಕ್ಷಣ ಸ್ವರ್ಗ ಕಣ್ಣೆದುರೇ ಬಂದಂತಾಗಿ ಮುಖ ಅರಳಿತು... ಕಣ್ಣು ಆಶ್ಚರ್ಯದಿಂದ ಅಗಲವಾಗಿ ಅವರನ್ನೇ ನೋಡುವಾಗ.... "......ಎಷ್ಟೊಂದು ಶಬ್ದ ಮಾಡ್ಕೊಂಡು ತಿಂತಿದೀಯ... ಜೋರಾಗಿ ಕೇಳಿಸುತ್ತಿದೆ " ಅನ್ನೋದೇ ಆಸಾಮಿ. ಅರಳಿದ್ದ ಕಣ್ಣಲ್ಲಿ ನೀರು ಬರೋಷ್ಟು ನಕ್ಕಿದ್ದಾಯ್ತು!!
ಹತ್ತಿರದಲ್ಲೇ ಸ್ವರ್ಗ ರಪ್ ಅಂತ ಪಾಸಾದ್ಹಂಗಾಯ್ತು!!!
11ನೇ ಮಹಡಿಗೆ ನೀರು ಏರಲು ಇರಬೇಕಾದ ಒತ್ತಡ ಏರುಪೇರಾಗುವುದರ ಕಾರಣವೋ, ನೀರಿಲ್ಲದಿರುವಾಗ ಆಗುವ airlockನ ಕಾರಣವೋ, ಒಮ್ಮೊಮ್ಮೆ bathroom ನ comode ನಲ್ಲಿ flush ಮಾಡಿದ ಕೂಡಲೇ ಭುಷ್ಷ್ ಎಂದು ಆ ಕೊಳಕು ನೀರು ಹೊರಗೆಲ್ಲಾ ಚಿಮ್ಮುವುದುಂಟು.
ನಾನು ಸ್ಮೇರ ನಿನ್ನೆ ಸೋಫಾದ ಮೇಲೆ ಏನೋ ಓದುತ್ತಾ ಕುಳಿತಿದ್ದೆವು. ಯಾರೋ bathroom ನಲ್ಲಿ flush ಮಾಡಿದಾಗ ಬಂದ ಶಬ್ದ ಗ್ರಹಿಸಿ ohhooo somebody just met with an accident!!!! ಎಂದು ಜೋರಾಗಿ ನಗತೊಡಗಿದಳು. 🤣
ಇಂದು ಮುಖ್ಯವಾದ ದಿನ. 1st STD admission ಗೆ 2 ತಾಸಿನ ಪರೀಕ್ಷೆ. ಅವಳಿಗಿದೇ ಮೊದಲನೆಯದು. ನನಗೆಲ್ಲ ಬರತ್ತೆ ಅಮ್ಮ ಅಂತ ಖುಷಿ ಇಂದ ಒಳಗೆ ಹೋಗಿದಾಳೆ ಪುಟ್ಟಿ. ಹೊರಗೆ ಕಾಯುತ್ತ ಏನೋ ಆತಂಕ ನನಗೆ. ಬಹಳ ಸಂಭ್ರಮದಿಂದಿರುವ ಅವಳಿಗೆ ಹೇಳುತ್ತಿದ್ದೆ... ಗಮನಿಸಿ ಬರಿ... ಬಣ್ಣ neat ಆಗಿ ತುಂಬಿಸು ಅಂತ... ಉತ್ಸಾಹದ ಚಿಲುಮೆಯಂತೆ ನುಡಿದಳು.. ನಾಳೆಯಿಂದ ಪುಟಾಣಿ uniform ಹಾಕ್ಕೊಂಡು.... yellow bus ಅಲ್ಲಿ school ಹೋಗಬೇಕಲ್ಲಪ್ಪಾ ನಾನು...
ಸ್ಮೇರಳ 6ನೇ ಹುಟ್ಟುಹಬ್ಬದ ಆಚರಣೆಯ ಸಂಭ್ರಮ. ಇದೇ ಉದ್ದೇಶದಿಂದ sweets order ಮಾಡಲು ಹೊರಟೆ. school ಇಂದ ಸ್ಮೇರ ವಾಪಸ್ ಬರೋ ಹೊತ್ತಿಗೆ ಮನೆಗೆ ನಾನು ಬರೋದು ಸಾಧ್ಯವಿಲ್ಲ ಎಂದು ಅನಿಸಿ, school ಇಂದ ಅವಳನ್ನೂ ಕರೆದುಕೊಂಡು ಹೋದೆ. ಮಧ್ಯಾಹ್ನ 2 ಘಂಟೆ. ಪಾಪ ಹಸಿವೆ ಆಗಿರಬಹುದು ಅಂತ ಅಲ್ಲೇ ಆಹಾರ 2020 ಯಲ್ಲಿ chilli cheese sandwich ಕೊಡಿಸಿದೆ. ಇವಳ ಅಭ್ಯಾಸ ಗೊತ್ತಿದ್ದರಿಂದ ಮೊದಲೇ ಹೇಳಿದೆ - ಮನೆಗೆ ಅಕ್ಕ ಬಂದ ಕೂಡಲೆ ಬತ್ತಿ ಹಚ್ಚಬೇಡ sandwich ತಿಂದೆ ಅಂತ. ಬೇಜಾರು ಮಾಡ್ಕೊಳ್ಳತ್ತೆ ಆ ಮಗು, ನಂಗೆ ಇಲ್ಲವಾ ಅಂತ. ಹಾಗೇನಾದರೂ ಮಾಡಿದರೆ ಇನ್ನೊಂದು ಸಲ ಏನೂ ಕೊಡಿಸೋದಿಲ್ಲ.
ಸಂಜೆ music class ಮುಗಿಸಿ car ನಲ್ಲಿ ಬರೋವಾಗ ಅಕ್ಕನ ಮುಂದೆ ಮೆಲ್ಲಗೆ ಶುರು ಮಾಡಿದಳು ನಮ್ಮ ಚತುರೆ. ಅಮ್ಮ ನಾವು chilli cheese sandwich ತಿನ್ನದೇ ಎಷ್ಟೊಂದು ದಿನ ಆಯ್ತು ಅಲ್ಲ್ವಾ ಅಮ್ಮ. ... !!
ನಾನು ಒಂದೆರಡು ಸಲ neglect ಮಾಡಿದೆ. ಕೊನೆಗೆ ಇವಳ ಕಿಚಿಕಿಚಿ ತಾಳಲಾರದೆ ನಾನೇ ಹೇಳಿ ಬಿಟ್ಟೆ. ಮಧ್ಯಾಹ್ನ ಕೊಡಿಸಿದ್ದೆನಲ್ಲಾ ಅಂತ. ಅಮ್ಮನ್ನ ಮಂಕು ಮಾಡಿದಳು. ಅಕ್ಕನ್ನ ಸಮಾಧಾನ ಮಾಡೋದು ಕಷ್ಟ ಆಗಲಿಲ್ಲ... ಆದರೂ ನನ್ನನ್ನೇ ಮಂಕು ಮಾಡಿದಳಲ್ಲಾ ಅಂತ ಪೆಚ್ಚಾಗಿ .... ತರಳೆಯ ಜಾಣ್ಮೆಯನ್ನು ಕೊಂಡಾಡಿದ್ದಾಯಿತು.....
ಮೂರು ಹೊತ್ತೂ ಟಿವಿ ಮುಂದೆ ಕೂತ್ಕೊಂಡು ರಿಮೋಟ್ ನಂದು, my tv time, ಅಂತ ಗಲಾಟೆ ಮಾಡೋದು routine. ಪುಟಾಣಿ ಸಾಕು ಟಿವಿ off ಮಾಡು ಅಂತ ಕೂಗಿದರೂ 5 minutes ಮಾ ಅನ್ನೋದು channel change ಮಾಡೋದು...ಇದೇ ಕೆಲಸ. ಅಕ್ಕ ತಂಗಿಯರು ಇಬ್ಬರಿಗೂ competition.
ಒಂದು ದಿನ, ಅಪ್ಪ office ಇಂದ ಬರೋ ಹೊತ್ತಿಗೆ ಅಕ್ಕ ತಂಗಿಯರ ಟಿವಿ session ನಡೀತಾ ಇತ್ತು. ಅಪ್ಪಂಗೂ ಸ್ವಲ್ಪ ಕೋಪ ಬಂತು. ಇಬ್ಬರಿಗೂ ಆಗಾಗ ಒಂದೊಂದು task ಕೊಡು. every task fetches them some points. they can redeem it for tv time. cleaning, ಅಡುಗೆ ಮನೇಲಿ help ಮಾಡೋದು... toilet clean ಮಾಡೋದು...ಹೀಗೆ. toilet clean ಮಾಡಿದರೆ 200 points. it fetches 2hrs tv time...and so on..ಅಂದರು.
ಅವರಿನ್ನೂ ಹೇಳಿ ಮುಗಿಸಿರಲಿಲ್ಲ ...ಅಕ್ಕಾ please toilet clean ಮಾಡ್ತೀಯಾ... ಅಂದಳು ನಮ್ಮ ಪುಟ್ಟ ತರಳೆ.
ಅಕ್ಕ ಒಂದು ಕ್ಷಣ ಸುಸ್ತು... ಅಪ್ಪ ಅಮ್ಮ ಇಬ್ಬರೂ ದಂಗು.... ಎಲ್ಲರೂ ನಕ್ಕಿದ್ದೆ ನಕ್ಕಿದ್ದು.