ಸ್ಮೇರಳ 6ನೇ ಹುಟ್ಟುಹಬ್ಬದ ಆಚರಣೆಯ ಸಂಭ್ರಮ. ಇದೇ ಉದ್ದೇಶದಿಂದ sweets order ಮಾಡಲು ಹೊರಟೆ. school ಇಂದ ಸ್ಮೇರ ವಾಪಸ್ ಬರೋ ಹೊತ್ತಿಗೆ ಮನೆಗೆ ನಾನು ಬರೋದು ಸಾಧ್ಯವಿಲ್ಲ ಎಂದು ಅನಿಸಿ, school ಇಂದ ಅವಳನ್ನೂ ಕರೆದುಕೊಂಡು ಹೋದೆ. ಮಧ್ಯಾಹ್ನ 2 ಘಂಟೆ. ಪಾಪ ಹಸಿವೆ ಆಗಿರಬಹುದು ಅಂತ ಅಲ್ಲೇ ಆಹಾರ 2020 ಯಲ್ಲಿ chilli cheese sandwich ಕೊಡಿಸಿದೆ. ಇವಳ ಅಭ್ಯಾಸ ಗೊತ್ತಿದ್ದರಿಂದ ಮೊದಲೇ ಹೇಳಿದೆ - ಮನೆಗೆ ಅಕ್ಕ ಬಂದ ಕೂಡಲೆ ಬತ್ತಿ ಹಚ್ಚಬೇಡ sandwich ತಿಂದೆ ಅಂತ. ಬೇಜಾರು ಮಾಡ್ಕೊಳ್ಳತ್ತೆ ಆ ಮಗು, ನಂಗೆ ಇಲ್ಲವಾ ಅಂತ. ಹಾಗೇನಾದರೂ ಮಾಡಿದರೆ ಇನ್ನೊಂದು ಸಲ ಏನೂ ಕೊಡಿಸೋದಿಲ್ಲ.
ಸಂಜೆ music class ಮುಗಿಸಿ car ನಲ್ಲಿ ಬರೋವಾಗ ಅಕ್ಕನ ಮುಂದೆ ಮೆಲ್ಲಗೆ ಶುರು ಮಾಡಿದಳು ನಮ್ಮ ಚತುರೆ. ಅಮ್ಮ ನಾವು chilli cheese sandwich ತಿನ್ನದೇ ಎಷ್ಟೊಂದು ದಿನ ಆಯ್ತು ಅಲ್ಲ್ವಾ ಅಮ್ಮ. ... !!
ನಾನು ಒಂದೆರಡು ಸಲ neglect ಮಾಡಿದೆ. ಕೊನೆಗೆ ಇವಳ ಕಿಚಿಕಿಚಿ ತಾಳಲಾರದೆ ನಾನೇ ಹೇಳಿ ಬಿಟ್ಟೆ. ಮಧ್ಯಾಹ್ನ ಕೊಡಿಸಿದ್ದೆನಲ್ಲಾ ಅಂತ. ಅಮ್ಮನ್ನ ಮಂಕು ಮಾಡಿದಳು. ಅಕ್ಕನ್ನ ಸಮಾಧಾನ ಮಾಡೋದು ಕಷ್ಟ ಆಗಲಿಲ್ಲ... ಆದರೂ ನನ್ನನ್ನೇ ಮಂಕು ಮಾಡಿದಳಲ್ಲಾ ಅಂತ ಪೆಚ್ಚಾಗಿ .... ತರಳೆಯ ಜಾಣ್ಮೆಯನ್ನು ಕೊಂಡಾಡಿದ್ದಾಯಿತು.....
No comments:
Post a Comment